ಕುಂದಾಪುರದ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯವು ಇಡೀ ತಾಲೂಕಿನ ಪ್ರಥಮ ಕಲಾ , ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯವಾಗಿರುತ್ತದೆ. ಪರ್ಶಿಯನ್ ಗಲ್ಫ್ ಪ್ರದೇಶದಲ್ಲಿರುವ ಬಹರಿನ್ ನಲ್ಲಿ ವೈದ್ಯ ವೃತ್ತಿಯಲ್ಲಿ ತೊಡಗಿಕೊಂಡಿದ್ದ ಡಾ. ಎ . ಎಸ್ . ಭಂಡಾರ್ಕಾರ್ ರವರು ಉದಾರವಾಗಿ ನೀಡಿದ ರೂ. ೨,೦೦,೦೦೦ದ ಫಲವಾಗಿ ಈ ಮಹಾವಿದ್ಯಾಲಯವು ಸ್ಥಾಪನೆಯಾಗಿರುತ್ತದೆ. ನಮ್ಮ ತಾಲೂಕಿನ ಹಲವು ಸಮಯದ ಬೇಡಿಕೆಯಾಗಿದ್ದ ಮಹಾವಿದ್ಯಾಲಯದ ಸ್ಥಾಪನೆಗಾಗಿ ಕುಂದಾಪುರದ ನಾಗರಿಕರು ಹಾಗೂ ರೋಟರಿ ಕ್ಲಬ್ ನ ಪ್ರಯತ್ನ ಶ್ಲಾಘನೀಯವಾಗಿರುತ್ತದೆ. ಕುಂದಾಪುರದ ನಾಗರಿಕರ ಸಹಕಾರದಲ್ಲಿ (ಭಂಡಾರ್ಕಾರ್ಸ್ ಕಾಲೇಜು ವಿಶ್ವಸ್ಥ ಮಂಡಳಿಯ ಆಡಳಿತ ಮುಖೇನ) ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಶನವರು ಈ ಸಂಸ್ಥೆಯನ್ನು ಪೋಷಿಸುವ ಜವಾಬ್ದಾರಿಯನ್ನು ತೆಗೆದುಕೊಂಡರು. ಜೂನ್ ೧೯೬೩ರಂದು ಸ್ಥಾಪನೆಗೊಂಡ ಈ ಮಹಾವಿದ್ಯಾಲಯವು ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ನಿಂದ ಪ್ರಾಯೋಜಿತಗೊಂಡು ೨೦೧೭ರಿಂದ ನ್ಯಾಕ್ ಸಂಸ್ಥೆಯಿಂದ 'ಎ' ಶ್ರೇಣಿಯೊಂದಿಗೆ ಮಂಗಳೂರು ವಿಶ್ವವಿದ್ಯಾಲಯ ಪ್ರಮುಖ ಸಂಯೋಜಿತ ಮಹಾವಿದ್ಯಾಲಯಗಳಲ್ಲಿ ಒಂದಾಗಿದೆ.
ಮೌಲಿಕ ಹಾಗೂ ಮಾನವೀಯ ಮೌಲ್ಯಗಳಿಂದ ಕೂಡಿದ ಉನ್ನತ ಶಿಕ್ಷಣವು ಸಮಾಜದ ಎಲ್ಲಾ ಸಮುದಾಯಗಳಿಗೂ ಸಿಗುವಂತೆ ಮಾಡುವುದು.
ಅಧ್ಯಾಪನ ಮತ್ತು ಅಧ್ಯಯನ ಕ್ಷೇತ್ರದಲ್ಲಿ ಆಗುತ್ತಿರುವ ತಾಂತ್ರಿಕ ಬೆಳವಣಿಗೆಯ ಜೊತೆಗೆ ಮೌಲ್ಯಾಧಾರಿತ ಹಾಗೂ ಕೌಶಲ್ಯಾಧಾರಿತ , ಪಠ್ಯೇತರ ಮತ್ತು ಪಠ್ಯ ಪೂರಕ ಚಟುವಟಿಕೆಗಳಿಂದ ವಿದ್ಯಾರ್ಥಿ ಕೇಂದ್ರಿತ, ಸಂಶೋಧನಾತ್ಮಕ ಅಧ್ಯಯನದ ವಾತಾವರಣಕ್ಕೋಸ್ಕರ ಸಾಕಷ್ಟು ಬೌತಿಕ ಸೌಲಭ್ಯಗಳನ್ನು ಒದಗಿಸುವುದು.
ಸಮಕಾಲೀನ ಅವಶ್ಯಕತೆಗಳಿಗನುಗುಣವಾಗಿ ಮೌಲ್ಯಾಧಾರಿತ ಶಿಕ್ಷಣವನ್ನು ನೀಡಿ ಸಾಮಾಜಿಕ ಜವಾಬ್ದಾರಿಯೊಂದಿಗೆ ಉತ್ತಮ ನೈತಿಕ ಕಾಳಜಿ ಹೊಂದಿದ ವಿದ್ಯಾರ್ಥಿಗಳನ್ನು ರೂಪುಗೊಳಿಸುವುದು .

ಕಾಲೇಜಿನ ವೀಡಿಯೊ

ಕಾಲೇಜಿನ ಕಾರ್ಯಕ್ರಮಗಳ ವೀಡಿಯೊ

ಪ್ರಾಂಶುಪಾಲರ ನುಡಿ

ಡಾ.ಎನ್.ಪಿ.ನಾರಾಯಣ ಶೆಟ್ಟಿ

MA,M.Phil,Ph.D,MBA

"ನಮ್ಮ ಕಾಲೇಜನ್ನು ಈ ಮೂಲಕ ಪ್ರಸ್ತುತಪಡಿಸಲು ನನಗೆ ಹೆಮ್ಮೆಯೆನಿಸುತ್ತದೆ ಮತ್ತು ಕಾಲೇಜಿನ ಪ್ರಗತಿಯಲ್ಲಿ ಭಾಗಿದಾರರಾಗಿ ತೊಡಗಿಸಿಕೊಳ್ಳುವಂತೆ ನಿಮ್ಮನ್ನು ಸ್ವಾಗತಸುತ್ತೇನೆ."
"ಸಮಯ ಕಳೆದಂತೆ, ಉದಾತ್ತ ಬದಲಾವಣೆಗಳು ಮತ್ತು ಅಭಿವೃದ್ಧಿಯ ಅವಶ್ಯಕತೆ ತಲೆದೋರುತ್ತದೆ ಮತ್ತು ಈ ಕಾಲೇಜನ್ನು ತಾಜಾ ಸಮೃದ್ಧಿಯತ್ತ ಮುನ್ನಡೆಯಲು ಮತ್ತು ಇದನ್ನು ಭಾರತದ ಪ್ರಮುಖ ಕಾಲೇಜುಗಳಲ್ಲಿ ಒಂದಾಗಿ ನಿರ್ವಹಿಸಲು ಇದು ಕಾರಣವಾಗಿದೆ."
"೧೯೬೩ ರಲ್ಲಿ ಪ್ರಾರಂಭವಾದಾಗಿನಿಂದ, ಕಾಲೇಜು ಗುಣಾತ್ಮಕವಾಗಿ ಮತ್ತು ಪರಿಣಾತ್ಮಕವಾಗಿ ಪ್ರಗತಿಯಲ್ಲಿದೆ ಮತ್ತು ಇದು 'ಎ' ಗ್ರೇಡ್ ನೊಂದಿಗೆ ನ್ಯಾಕ್ ಮಾನ್ಯತೆ ಪಡೆದ ದೇಶದ ಪ್ರಮುಖ ಕಾಲೇಜುಗಳಲ್ಲಿ ಒಂದಾಗಿದೆ."

ನಮ್ಮ ಅಧ್ಯಯನ ವಿಷಯಗಳು

ರ‍್ಯಾಂಕ್‌ ವಿಜೇತರು 2019

ಮಂಗಳೂರು ವಿಶ್ವವಿದ್ಯಾಲಯದ 2019 ರ ಪರೀಕ್ಷೆಗಳಲ್ಲಿ ರ‍್ಯಾಂಕ್‌ ಪಡೆಡಿರುವ ವಿದ್ಯಾರ್ಥಿಗಳಿಗೆ ಹಾರ್ದಿಕ ಅಭಿನಂದನೆಗಳು.


Ms.Keerthi S
IV Rank in B.A

Ms.Madhushree
VIII Rank in B.Com

Ms.Meghana Prabhu
IV Rank in B.Sc

Ms.Nagarathna
V Rank in B.Sc

Ms. Gauthami S Ganiga
IX Rank in B.Sc

Ms. Naima Parveen
II Rank in B.C.A

Ms. Pallavi
IV Rank in B.C.A

Ms. Deepa
V Rank in B.C.A

ಗ್ಯಾಲರಿ